Sunday, March 4, 2012

hudukata

ಓ ಮೇಘಗಳೇ
ನಿಮ್ಮಲೆನಾದರೂ ಮುಚಿಟಿದಿರ
ನನ್ನ ಹಳೆಯ ಕಳೆದು ಹೋಗಿರುವ
ಕಾಲ
ಚಿಕ್ಕ ಹುದುಗನಿದಾಗ
ಬಯಲಿನ್ನಲಿ ಆಡುತ
ಚಿಟ್ಟೆ ಹಿಡಿಯುತ್ತ
ಮಳೆಯಲ್ಲಿ ತೊಯ್ಯುತ
ಕಾಡಿನ ಹಾಧಿಯಲ್ಲಿ ಕುತೂಹಲದಿಂದ ಭಯ ಪಡುತ್ತ
ಕಣ್ಣರಳಿಸಿ ಹುಡುಕುತಿದ್ದ ಹೂಗಳು
ಗರಿಕೆಯ ಹುಲ್ಲಿನ ಮೆದು ಹಾದಿ
ಮಾವಿನ ಮರದ ಕೊಂಬೆಗೆ ಕಟ್ಟಿದ ಹಗ್ಗಕೆ.
ತೂಗುವ ಊಯ್ಯಾಲೆ
ಅಜ್ಜಿಯ ತೊಡೆಯ ಮೇಲೆ ಮಲಗಿ ಕೇಳುತಿದ್ದ
ರಾಕ್ಷಾಸರ ಕತೆಗಳು
ಬೇಸಿಗೆಯಲ್ಲಿ ರೈಲಿನಲ್ಲಿ ಊರಿಗೆ ಹೊಗುತ್ತಿದ ಸಂಭ್ರಮ್ಮ
ಸ್ನೇಹಿತರ ಹೆಗಲ ಮೇಲೆ ಕೈ ಹಾಕಿ ನಡೆಯುತಿದ್ದ ಸಂತಸ
ವರ್ತಮಾನದಲ್ಲಿ ಯಂತ್ರಗಳಂತೆ
ಬದುಕುತ್ತಿರುವ
ನನಗೆ ನೀವೇ ಆಶಾಕಿರಣಗಳಂತೆ ಕಾಣುತಿರೀ
ಎಂದಾದರೊಮ್ಮೆ
ಕಳೆದು ಹೋದ
ಕಾಲವನೊಮ್ಮೆ
ಮತ್ತೆ
ನಿಮ್ಮ ಮೋಡಗlalli
ಕಾಣುತೇನೋ
ಎಂಬ ಆಸೆಯಿಂದ ದಿನವು ಕತೆತ್ತಿ
ನೋದುತ್ತಲೇ ಇರುತೇನೆ
ಬರಲಾಗದ ಕಾಲದ
ನನಸಾಗದ ಕನಸುಗಳು
ಸುಂದರ ನೆನಪುಗಳು

No comments: