Sunday, March 4, 2012

kaala

ಕಾಲದ ನಡಿಗೆಯಲ್ಲಿ
ಹಾದಿ ಸವೆದುದ್ದೇ ತಿಳಿಯಲಿಲ್ಲ
ನೆನ್ನೆಗಳಿದ್ದವು ನಮ್ಮ ಜೊತೆಯಲ್ಲಿ
ನಾವಿಬ್ಬರಿದ್ದೆವು
ಅರಿವಿರದ ಬಾಹ್ಯ ಜಗತಿನಲ್ಲಿ
ಕನಸುಗಳಿದವು ಜೊತೆಯಲ್ಲೇ
ನಿರ್ಮಲ ಮನಸುಗಳಿದವು
ಕಲ್ಮಶವಾಗದ ಪ್ರಕೃತಿಯಲ್ಲಿ
ಏನಾಗಿ ಹೋಯಿತು
ಕಳೆದು ಹೋದವಲ್ಲೇ
ವರ್ತಮಾನದ ವೇಗಕ್ಕೆ
ಮಾನವೀಯತೆ ಇಲ್ಲದ ಯಂತ್ರಗಳು
ಬೆಲೆ ಇಲ್ಲದ ಜೀವಗಳು
ಪ್ರೀತಿ ಇಲ್ಲದ ಹೃದಯಗಳು
ಬಟ್ಟ ಬಯಲು ಮುಚಿದಳು ಏನು ಇಲ್ಲ
ಕೊನೆಗೆ ಮಾನವನ್ನು ಸಹ
ಆದುನಿಕತೆಯ ಅಬ್ಬರದಲ್ಲಿ
ಸೃಜನತೆಯ ಸಾವು
ಉಳಿದಿವುದಿನೇನು ಬರಿ ನೋವು
ನಿನ್ನೊಡನೆ ಕಳೆದ ಆ ಕ್ಷಣದ
ನೆನಪು
ಮುತುಗದ ಹೂವು

No comments: